Subject: Full Information Of Nobel Prize 2022
Language: KannadA
ಮಾನವಕುಲಕ್ಕೆ ಹಾಗೂ ಸಮಾಜಕ್ಕೆ ತಮ್ಮದೇ ಆಗಿರುವ ವಿಶಿಷ್ಟ ಕೊಡುಗೆಯನ್ನು ನೀಡಿದ ಸಾಧಕರನ್ನು ಗುರುತಿಸಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕಳೆದ 1895ರಿಂದ ಆಲ್ಫ್ರೆಡ್ ನೊಬೆಲ್ ಅವರ ಇಚ್ಛೆಯ ಪ್ರಕಾರ ಐದು ಪ್ರತ್ಯೇಕ ವಿಭಾಗಗಳಲ್ಲಿ ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ನೊಬೆಲ್ ಪ್ರಶಸ್ತಿಗಳನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ಶರೀರಶಾಸ್ತ್ರ ಅಥವಾ ಔಷಧ, ಸಾಹಿತ್ಯ ಮತ್ತು ಶಾಂತಿ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಯನ್ನು ತೋರಿದ ಸಾಧಕರನ್ನು ಗುರುತಿಸಿ ಗೌರವದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
Department: NOBEL
Published Date:06-10-2022
ನೊಬೆಲ್ ಪ್ರಶಸ್ತಿಗಳನ್ನು ಆಯಾ ಕ್ಷೇತ್ರಗಳಲ್ಲಿ ಲಭ್ಯವಿರುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳೆಂದು ಪರಿಗಣಿಸಲಾಗುತ್ತದೆ. ಈ ಬಹುಮಾನ ಸಮಾರಂಭಗಳು ವರ್ಷದಲ್ಲಿ ಒಂದು ಬಾರಿ ನಡೆಯುತ್ತವೆ. ಈ ಪ್ರಶಸ್ತಿಯನ್ನು ಸ್ವೀಕರಿಸುವವರಿಗೆ ಚಿನ್ನದ ಪದಕ, ಡಿಪ್ಲೊಮಾ ಮತ್ತು ವಿತ್ತೀಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
2022ನೇ ಸಾಲಿನಲ್ಲಿ ಐದು ವಿಭಾಗಗಳಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದವರು ಯಾರು?, ಯಾವ ವಿಭಾಗದಲ್ಲಿ ಯಾರಿಗೆ ನೊಬೆಲ್ ಪುರಸ್ಕಾರವನ್ನು ನೀಡಲಾಗಿದೆ? ಭಾರತದಲ್ಲಿ ಇದುವರೆಗೂ ನೊಬೆಲ್ ಪ್ರಶಸ್ತಿ ಪಡೆದ ಸಾಧಕರು ಯಾರು? ನೊಬೆಲ್ ಪ್ರಶಸ್ತಿ ಎಂದರೆ ಏನೆಲ್ಲಾ ಇರುತ್ತದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ತಿಳಿದುಕೊಳ್ಳಿರಿ.
ನೊಬೆಲ್ ಪುರಸ್ಕೃತರ ಆಯ್ಕೆ ಹೇಗೆ ನಡೆಯುತ್ತದೆ?
ನಾರ್ವೇಜಿಯನ್ ನೊಬೆಲ್ ಸಮಿತಿಯು ಆಲ್ಫ್ರೆಡ್ ನೊಬೆಲ್ ಇಚ್ಛೆಗೆ ಅನುಗುಣವಾಗಿ ಪ್ರತಿ ವರ್ಷ ನೊಬೆಲ್ ಪ್ರಶಸ್ತಿ ವಿಜೇತರನ್ನು ನಾಮನಿರ್ದೇಶನ ಮಾಡುವ ಮತ್ತು ಅಂತಿಮವಾಗಿ ಆಯ್ಕೆ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತದೆ. ನೊಬೆಲ್ ಪ್ರಶಸ್ತಿ ವಿಜೇತರನ್ನು 3ರ ಅಕ್ಟೋಬರ್ 2022 ರಿಂದ ಘೋಷಿಸುವುದಕ್ಕೆ ಪ್ರಾರಂಭಿಸಲಾಗಿತ್ತು. 10ನೇ ಅಕ್ಟೋಬರ್ 2022 ರವರೆಗೆ ಈ ಪ್ರಕ್ರಿಯೆಯು ಮುಂದುವರಿಯುತ್ತದೆ.

ಶರೀರಶಾಸ್ತ್ರ ಮತ್ತು ಔಷಧ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಯಾರಿಗೆ?
2022ನೇ ಸಾಲಿನಲ್ಲಿ ಶರೀರಶಾಸ್ತ್ರ ಮತ್ತು ಔಷಧ ವಿಭಾಗದಲ್ಲಿ ಪ್ರೊಫೆಸರ್ ಸ್ವಾಂಟೆ ಪಾಬೊಗೆ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಸ್ವೀಡಿಷ್ ಜೆನೆಟಿಸಿಸ್ಟ್, ಮಾನವಕುಲದ ಎರಡು ಆರಂಭಿಕ ಪೂರ್ವಜರ ಆನುವಂಶಿಕ ಗುರುತನ್ನು ಕಂಡುಹಿಡಿದರು. ಈ ಪ್ರಕ್ರಿಯೆಯಲ್ಲಿ ಮಾನವ ವಿಕಾಸದ ಮೇಲೆ ಹೊಸ ಮಾರ್ಗವನ್ನು ತೋರುತ್ತದೆ.
ಭೌತಶಾಸ್ತ್ರ ವಿಭಾಗದಲ್ಲಿ ನೊಬೆಲ್ ಯಾರಿಗೆ?
ಮೂವರು ವಿಜ್ಞಾನಿಗಳಿಗೆ ಜಂಟಿಯಾಗಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಫ್ರೆಂಚ್‌ನ ಅಲೈನ್ ಆಸ್ಪೆಕ್ಟ್, ಅಮೇರಿಕನ್ ಜಾನ್ ಎಫ್. ಕ್ಲೌಸರ್ ಮತ್ತು ಆಸ್ಟ್ರಿಯನ್ ಆಂಟನ್ ಝೈಲಿಂಗರ್ ಅವರಿಗೆ ನೊಬೆಲ್ ಪ್ರಶಸ್ತಿ ಅನ್ನು ನೀಡಲಾಗಿದೆ. ಅವರು ಕ್ವಾಂಟಮ್ ಮೆಕ್ಯಾನಿಕ್ಸ್‌ನಲ್ಲಿ ಪ್ರಯೋಗಗಳನ್ನು ನಡೆಸಿದರು, ಅದು ಕಂಪ್ಯೂಟಿಂಗ್ ಮತ್ತು ಕ್ರಿಪ್ಟೋಗ್ರಫಿಯಲ್ಲಿ ವೇಗವಾಗಿ-ಅಭಿವೃದ್ಧಿಪಡಿಸುವ ಹೊಸ ಅಪ್ಲಿಕೇಶನ್‌ಗಳಿಗೆ ಅಡಿಪಾಯವನ್ನು ಹಾಕಿತು.
ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಯಾರಿಗೆ?
ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಅಮೆರಿಕನ್ನರಾದ ಕ್ಯಾರೊಲಿನ್ ಆರ್. ಬರ್ಟೊಝಿ ಮತ್ತು ಕೆ. ಬ್ಯಾರಿ ಶಾರ್ಪ್‌ಲೆಸ್ ಮತ್ತು ಡ್ಯಾನಿಶ್ ವಿಜ್ಞಾನಿ ಮೊರ್ಟೆನ್ ಮೆಲ್ಡಾಲ್ ಅವರಿಗೆ “ಅಣುಗಳನ್ನು ಒಟ್ಟಿಗೆ ಸ್ನ್ಯಾಪಿಂಗ್ ಮಾಡುವ” ವಿಧಾನವನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ನೀಡಲಾಯಿತು. ಇದರಿಂದ ಕ್ಯಾನ್ಸರ್‌ನಂತಹ ರೋಗಗಳನ್ನು ಹೆಚ್ಚು ನಿಖರವಾಗಿ ಗುರಿಪಡಿಸುವ ಜೀವಕೋಶಗಳನ್ನು ಅನ್ವೇಷಿಸುವ ಡಿಎನ್‌ಎ ನಕ್ಷೆಯನ್ನು ಮತ್ತು ಔಷಧಗಳನ್ನು ವಿನ್ಯಾಸಗೊಳಿಸಲು ಸಾಧ್ಯವಾಗುತ್ತದೆ.
ಸಾಹಿತ್ಯ ಕ್ಷೇತ್ರದಲ್ಲಿ ಯಾರಿಗೆ ನೊಬೆಲ್ ಪ್ರಶಸ್ತಿ?
ಸಾಹಿತ್ಯ ವಿಭಾಗದಲ್ಲಿ 2022ನೇ ಸಾಲಿನ ನೊಬೆಲ್ ಪ್ರಶಸ್ತಿಯು ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ ಮುಡಿಗೇರಿದೆ. “ಧೈರ್ಯ ಮತ್ತು ವೈದ್ಯಕೀಯ ತೀಕ್ಷ್ಣತೆಗೆ ಸಂಬಂಧಿಸಿದ ಅವರು ವೈಯಕ್ತಿಕ ಸ್ಮರಣೆಯ ಬೇರು, ಪ್ರತ್ಯೇಕತೆಗಳು ಮತ್ತು ಸಾಮೂಹಿಕ ನಿರ್ಬಂಧಗಳನ್ನು ಬಹಿರಂಗಪಡಿಸಿದರು” ಎಂದು ಸ್ವೀಡಿಷ್ ಅಕಾಡೆಮಿ ಗುರುವಾರ ಹೇಳಿದೆ.
ಯಾರ ಮುಡಿಗೆ 2022ರ ನೊಬೆಲ್ ಶಾಂತಿ ಪ್ರಶಸ್ತಿ?
2022ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಬೆಲಾರಸ್‌ನ ಮಾನವ ಹಕ್ಕುಗಳ ವಕೀಲ ಅಲೆಸ್ ಬಿಲಿಯಾಟ್ಸ್ಕಿ, ರಷ್ಯಾದ ಮಾನವ ಹಕ್ಕುಗಳ ಸಂಸ್ಥೆ ಸ್ಮಾರಕ ಮತ್ತು ಉಕ್ರೇನಿಯನ್ ಮಾನವ ಹಕ್ಕುಗಳ ಸಂಸ್ಥೆ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್‌ಗೆ ನೀಡಲು ನಾರ್ವೇಜಿಯನ್ ನೊಬೆಲ್ ಸಮಿತಿಯು ನಿರ್ಧರಿಸಿದೆ.
ಇದುವರೆಗೂ ಭಾರತದಲ್ಲಿ ನೊಬೆಲ್ ಪಡೆದವರು ಯಾರು?
ನೊಬೆಲ್ ಪ್ರಶಸ್ತಿ ಪಡೆದವರು – ವಿಭಾಗ – ವರ್ಷ(ಟೇಬಲ್)
ರವೀಂದ್ರನಾಥ ಟ್ಯಾಗೋರ್ – ಸಾಹಿತ್ಯ – 1913
C. V. ರಾಮನ್ – ಭೌತಶಾಸ್ತ್ರ – 1930
ಮದರ್ ತೆರೇಸಾ – ಶಾಂತಿ – 1979
ಅಮರ್ತ್ಯ ಸೇನ್ – ಅರ್ಥಶಾಸ್ತ್ರ- 1998
ಕೈಲಾಶ್ ಸತ್ಯಾರ್ಥಿ – ಶಾಂತಿ – 2014
ಹರ್ ಗೋಬಿಂದ್ ಖೋರಾನಾ – ಔಶಧಿ – 1968
ಸುಬ್ರಹ್ಮಣ್ಯನ್ ಚಂದ್ರಶೇಖರ್ – ಭೌತಶಾಸ್ತ್ರ – 1983
ವೆಂಕಿ ರಾಮಕೃಷ್ಣನ್ – ರಸಾಯನಶಾಸ್ತ್ರ – 2009
ಅಭಿಜಿತ್ ಬ್ಯಾನರ್ಜಿ – ಅರ್ಥಶಾಸ್ತ್ರ – 2019
ರೊನಾಲ್ಡ್ ರಾಸ್ – ಔಷಧಿ – 1902
ರುಡ್ಯಾರ್ಡ್ ಕಿಪ್ಲಿಂಗ್ – ಸಾಹಿತ್ಯ – 1907
14ನೇ ದಲೈಲಾಮಾ – ಶಾಂತಿ – 1989
ನೊಬೆಲ್ ಪ್ರಶಸ್ತಿಯಲ್ಲಿ ಏನೆಲ್ಲಾ ಇರುವುದು?
ಜಗತ್ತಿನ ಶ್ರೇಷ್ಠ ಪ್ರಶಸ್ತಿಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ನೊಬೆಲ್ ಪ್ರಶಸ್ತಿಯು 10 ಮಿಲಿಯನ್ ಸ್ವೀಡಿಷ್ ಕ್ರೋನರ್ ಅಥವಾ ಸುಮಾರು 9,00,000 ಡಾಲರ್ ನಗದು ಬಹುಮಾನವನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿಯನ್ನು ಡಿಸೆಂಬರ್ 10 ರಂದು ಹಸ್ತಾಂತರಿಸಲಾಗುತ್ತು. ಈ ಹಣವು 1895ರಲ್ಲಿ ಬಹುಮಾನದ ಸೃಷ್ಟಿಕರ್ತರಾದ ಸ್ವೀಡಿಷ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರು ಬಿಟ್ಟು ಹೋಗಿರುವ ಮೃತ್ಯುಪತ್ರದತ್ತವಾದ ಆಸ್ತಿಯಿಂದ ಬರುತ್ತದೆ.